Spotting
 Timeline
 Travel Tip
 Trip
 Race
 Social
 Greeting
 Poll
 Img
 PNR
 Pic
 Blog
 News
 Conf TL
 RF Club
 Convention
 Monitor
 Admin
 Bookmark
 Rating
 Correct
 Wrong
 Stamp
 HJ
 Vote
 Pred
 @
 FM Alert
 FM Approval
 Pvt
News Super Search
 ↓ 
×
Member:
Posting Date From:
Posting Date To:
Category:
Zone:
Language:
IR Press Release:

Search
  Go  
Full Site Search
  Full Site Search  
 
Mon Dec 10 10:20:57 IST
Home
Trains
ΣChains
Atlas
PNR
Forum
Gallery
News
FAQ
Trips
Login
Feedback
Advanced Search

News Posts by 16591🔹Hampi Express🔹16592^~

Page#    Showing 1 to 5 of 3041 news entries  next>>
  
Dec 03 (17:44) ಕಗ್ಗದಾಸಪುರ ಸೇಲಂ ರೈಲ್ವೆ ಹಳಿ ಗೇಟ್ ಸದಾನಂದಗೌಡ ಪರಿವೀಕ್ಷಣೆ (www.eesanje.com)
Other News
SWR/South Western
0 Followers
1792 views

News Entry# 370717  Blog Entry# 4065345   
  Past Edits
This is a new feature showing past edits to this News Post.
ಕಗ್ಗದಾಸಪುರ ರೈಲ್ವೆ ಹಳಿ ಗೇಟ್ ಬಳಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಸಂಬಂಧ ಸೇಲಂ ರೈಲ್ವೆ ಹಳಿ ಗೇಟ್ ಬಳಿ ರೈಲ್ವೆ ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಪರಿವೀಕ್ಷಣೆ ನಡೆಸಿದರು. ಕಗ್ಗದಾಸಪುರ ಸೇಲಂ ರೈಲ್ವೆ ಹಳಿ ಗೇಟ್ ಪರಿವೀಕ್ಷಣೆ ನಡೆಸಿ ನಂತರ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಕಗ್ಗದಾಸಪುರ ರೈಲ್ವೆ ಮೇಲ್ಸೇತುವೆಯ ಯೋಜನೆಯನ್ನು ಕೈಬಿಟ್ಟು ಪರ್ಯಾಯ ಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿ ಸಲು ಕಗ್ಗದಾಸಪುರ ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ನಿರ್ಮಿಸಲಾಗಿತ್ತು, ಆದರೆ ಇದರಿಂದ ಸ್ಥಳೀಯರಿಗೆ ತೊಂದರೆಯಾಗುವ ಕಾರಣ ಸ್ಥಳೀಯರ ಒತ್ತಾಯ ಮತ್ತು ಮನವಿ ಮೇರೆಗೆ ಕಗ್ಗದಾಸಪುರ ರೈಲ್ವೆ ಗೇಟ್ ಬಳಿ ಮೇಲ್ಸೇತುವೆಯನ್ನು ಕೈಬಿಟ್ಟು ಹೊರವರ್ತುಲ ರಸ್ತೆಯಿಂದ ದೊಡ್ಡನೆಕ್ಕುಂದಿ ಕೆರೆ ಮತ್ತು ಕಗ್ಗದಾಸಪುರ ಕೆರೆ ಅಂಚಿನ ಮೂಲಕ ಹಳೇ ಏರ್‍ಪೆಪೋರ್ಟ್ ರಸ್ತೆಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಈ ಹಿಂದೆ ಕಗ್ಗದಾಸಪುರ ರೈಲ್ವೆ ಗೇಟ್ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು, ಅದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರ ರೈಲ್ವೆ ಇಲಾಖೆಗೆ 6900 ಅಡಿ ಜಾಗ ಒದಗಿಸಲು ಸಾಧ್ಯವಾಗಲಿಲ್ಲ,ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬಹು ಮಹಡಿ ಕಟ್ಟಡ ಹಾಗೂ ನೂರಾರು ವಾಸದ ಮನೆಗಳನ್ನು
...
more...
ತೆರವುಗೊಳಿಸಬೇಕಾಗಿತ್ತು. ಇದಕ್ಕೆ ಸ್ಥಳೀಯರಲ್ಲಿ ಅಸಮಾಧಾನವಿತ್ತು.
ಇದರಿಂದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು, ಆದ ಕಾರಣ ಈ ಯೋಜನೆಯನ್ನು ಕೈಬಿಟ್ಟು ಹತ್ತುಪಟ್ಟು ಉಪಯೋಗಕರವಾಗುವ ಬದಲಿ ರಸ್ತೆಯನ್ನು ನಿರ್ಮಿಸಲು ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು. ಈ ಯೋಜನೆಗೆ ಶೀಘ್ರದಲ್ಲಿ ಅನು ದಾನ ಬಿಡುಗಡೆ ಮಾಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಗುವುದು. ಇನ್ನೂ ಹೆಚ್ಚಿನ ಅನುದಾನ ಅವಶ್ಯಕತೆ ಯಿದ್ದಲ್ಲಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
8 ಮೀಟರ್ ಇರುವ ಕಗ್ಗದಾಸಪುರ ರೈಲ್ವೆ ಗೇಟ್12 ಮೀಟರ್‍ಗೆ ವಿಸ್ತರಣೆ ಮಾಡಿ ಸಂಚಾರದಟ್ಟಣೆಯನ್ನು ನಿಯಂತ್ರಣ ಮಾಡಲಾಗುವುದು ರೈಲ್ವೆ ಇಲಾಖೆ ಅಧಿಕಾರಿಗಳು ರೈಲ್ವೆ ಕೆಳಸೇತುವೆ ಕಾಮಗಾರಿ ಮಾಡಲಿದ್ದು, ರಸ್ತೆ ಹಾಗೂ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಬಿಡಿಎ, ಬಿಬಿಎಂಪಿ ವತಿಯಿಂದ ಮಾಡಬೇಕು ಈ ಸಂಬಂಧ ಅಧಿಕಾರಿಗಳೊಂದಿಗೆ ಹತ್ತು ದಿನದೊಳಗೆ ಸಭೆ ಸೇರಿ ಚರ್ಚೆ ನಡೆಸಲಾಗುವುದೆಂದರು. ಮಾಜಿ ಶಾಸಕ ಎನ್.ಎಸ್. ನಂದೀಶ ರೆಡ್ಡಿ, ಮಹದೇವಪುರ ವಲಯ ಜಂಟಿ ಆಯುಕ್ತ ಜಗದೀಶ್, ಮಾಜಿ ಪಾಲಿಕೆ ಸದಸ್ಯ ಕಲ್ಕೆರೆ ಶ್ರೀನಿವಾಸ್ ಮತ್ತು ರೈಲ್ವೆ, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.
  
Dec 03 (17:38) ಅಭಿವೃದ್ಧಿ ನಿರೀಕ್ಷೆಯಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣ (m.vijaykarnataka.com)
Other News
SWR/South Western
0 Followers
1983 views

News Entry# 370716  Blog Entry# 4065330   
  Past Edits
Dec 03 2018 (17:38)
Station Tag: Bantawala/BNTL added by 16591🔹Hampi Express🔹16592^~/36147
Stations:  Bantawala/BNTL  
ಬಿ.ಸಿ.ರೋಡ್‌-ಕೈಕುಂಜ ರಸ್ತೆಯಿಂದ ಬಂಟ್ವಾಳ ರೈಲ್ವೆ ನಿಲ್ದಾಣದ ಪ್ರಧಾನ ಪ್ಲಾಟ್‌ಫಾರ್ಮ್‌ಗೆ ಬರಲು ಹರಾಹಸ ಪಡಬೇಕು. ಪ್ಲಾಟ್‌ಫಾರ್ಮ್‌ ಸುತ್ತ ಬೆಳೆದ ಗಿಡಗಂಟಿಗಳ ನಡುವೆ ಬಂದು ಎರಡನೇ ಪ್ಲಾಟ್‌ಫಾರ್ಮ್‌ ಹತ್ತಿ ಅಲ್ಲಿಂದ ಮತ್ತೊಂದು ಸುತ್ತು ಬಂದು, ಮೊದಲನೇ ಪ್ಲಾಟ್‌ಫಾರ್ಮ್‌ ಹತ್ತಬೇಕು. ಒಂದು ವೇಳೆ ಗೂಡ್ಸ್‌ ರೈಲೇನಾದರೂ ಎರಡನೇ ಹಳಿಯಲ್ಲಿ ನಿಂತಿದ್ದರೆ, ಅದರ ಅಡಿಯಲ್ಲಿ ನುಗ್ಗಬೇಕು.
ಬಂಟ್ವಾಳ ರೈಲ್ವೆ ನಿಲ್ದಾಣ ನಿರ್ಮಿಸಿದಂದಿನಿಂದ ಈ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಈ ಬಗ್ಗೆ ಸ್ಥಳೀಯರು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದರೂ ಉತ್ತರವಿಲ್ಲ. ಆಗಾಗ್ಗೆ ಬಳಕೆದಾರರ ವೇದಿಕೆಯಲ್ಲಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಗೊಂಡಾಗ 'ಮಾಡುತ್ತೇವೆ' ಎಂಬ ರೆಡಿಮೇಡ್‌ ಉತ್ತರ ಬರುತ್ತದೆ. ಈಗಲೂ ಅಧಿಕೃತವಾಗಿ ಕೆಲಸ ಆರಂಭಗೊಂಡಿಲ್ಲ. ಆದರೆ ಆದರ್ಶ ರೈಲ್ವೆ ಯೋಜನೆಯಡಿ ಬಂಟ್ವಾಳ ರೈಲ್ವೆ ನಿಲ್ದಾಣ ಸೇರಿಕೊಂಡ ಕಾರಣ ಕಾಮಗಾರಿ ನಡೆಯುವ ವಿಶ್ವಾಸ ಬಳಕೆದಾರರಿಗಿದೆ. ಇದಕ್ಕೂ ಜನಪ್ರತಿನಿಧಿಗಳು ಒತ್ತಡ ಹಾಕದಿದ್ದರೆ ಮತ್ತೆ ನನೆಗುದಿಗೆ ಸೇರಬಹುದು.
ಎಲ್ಲಿದೆ ರೈಲ್ವೆ ನಿಲ್ದಾಣ?: ಬಿ.ಸಿ.ರೋಡ್‌
...
more...
ಮಿನಿ ವಿಧಾನಸೌಧ ಇರುವ ಜಾಗದಿಂದ ಕೇವಲ 750 ಮೀ. ಮುಂದೆ ಸಾಗಿದರೆ ರೈಲ್ವೆ ನಿಲ್ದಾಣ ಸಿಗುತ್ತದೆ. ನಡೆದುಕೊಂಡೂ ಹೋಗಬಹುದು. ಪಾದಚಾರಿ ಮೇಲ್ಸೇತುವೆ ಇಲ್ಲದ ಕಾರಣ ಈ ಭಾಗದಿಂದ ಜನರು ಬರುವುದು ಕಡಿಮೆ. ತುಂಬೆ, ಮೊಡಂಕಾಪು ಪ್ರದೇಶಗಳಿಂದ ಬರುವವರಿಗೆ ಈ ದಾರಿ ಹತ್ತಿರ. ಬಿ.ಸಿ.ರೋಡ್‌ನ ನಾರಾಯಣಗುರು ವೃತ್ತದಿಂದ ಗೂಡಿನಬಳಿ ಕಡೆಗೆ ಹೋಗುವ ಜಾಗ ಇನ್ನೊಂದು. ಇಲ್ಲಿ ನಡೆದುಕೊಂಡು ಹೋಗಲು ಕಷ್ಟ. ಕಲ್ಲಡ್ಕ, ಬಂಟ್ವಾಳ, ಪಾಣೆಮಂಗಳೂರು ಪ್ರದೇಶಗಳಿಂದ ಬರುವವರಿಗೆ ಇದು ಅನುಕೂಲ.
ಕೆಲ ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಬಂಟ್ವಾಳ ರೈಲ್ವೆ ನಿಲ್ದಾಣ ಸುಧಾರಿಸಿದೆ. ಪ್ಲಾಟ್‌ ಫಾರ್ಮ್‌ನಲ್ಲಿ ಶೆಲ್ಟರ್‌, ಕುಳಿತುಕೊಳ್ಳಲು ಬೆಂಚುಗಳು ಬಂದಿವೆ. ಪ್ಲಾಟ್‌ಫಾರ್ಮ್‌ನುದ್ದಕ್ಕೂ ಟ್ಯೂಬ್‌ ಲೈಟ್‌ಗಳು ರಾತ್ರಿ ವೇಳೆ ಬೆಳಗುತ್ತವೆ. ಶೌಚಾಲಯವೂ ಚೆನ್ನಾಗಿದೆ. ಕ್ರಾಸಿಂಗ್‌ ಇತ್ಯಾದಿ ಇರುವ ಸಂದರ್ಭ ಎರಡು ಪ್ಲಾಟ್‌ ಫಾರ್ಮ್‌ಗಳನ್ನೂ ಸಕ್ರಿಯಗೊಳಿಸಿದರೆ ಅನುಕೂಲ. ಈ ಹಿನ್ನೆಲೆಯಲ್ಲಿ ಎರಡನೇ ಪ್ಲಾಟ್‌ಫಾರ್ಮ್‌ ಅಭಿವೃದ್ಧಿಯ ಅಗತ್ಯವಿದೆ.
ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ಹೋಗಬೇಕಾದರೆ ಹಳಿಯ ಮೇಲೆಯೇ ಸಾಗಬೇಕು. ಅದರ ಬದಲು ಫೂಟ್‌ ಓವರ್‌ಬ್ರಿಡ್ಜ್‌ ಇದ್ದರೆ ಚೆನ್ನಾಗಿರುತ್ತದೆ. ರೈಲ್ವೆ ನಿಲ್ದಾಣಕ್ಕೆ ಅಪರಿಚಿತರು ಬಂದು ಹೋಗದಂತೆ ಸ್ಟೇಶನ್‌ನಲ್ಲೇ ರೈಲ್ವೆ ಪೊಲೀಸರ ಅಗತ್ಯವಿದೆ. ಸಾಮಾನ್ಯವಾಗಿ ದೂರ ಪ್ರಯಾಣದ ರೈಲು ತಡವಾಗಿ ಬರುತ್ತದೆ ಎಂದಾಗ ಅಲ್ಲಿ ತಂಗುವ ಪ್ರಯಾಣಿಕರಿಗೆ ಸೂಕ್ತ ಭದ್ರತೆ ಹಾಗೂ ಅವರ ಕಡೆ ನಿಗಾ ಇರಿಸುವ ಜನಸ್ನೇಹಿ ಸಿಬ್ಬಂದಿ ಅವಶ್ಯಕತೆ ಇದೆ.
ಸುರಕ್ಷ ತೆಗೆ ಒತ್ತು ಅಗತ್ಯ: ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಜಾಗದ ಸುರಕ್ಷ ತೆಗೂ ಒತ್ತು ನೀಡುವುದು ಅಗತ್ಯ. ಪ್ಲಾಟ್‌ಫಾರ್ಮ್‌ನಲ್ಲಿ ಓಡಾಡುವವರ ಮೇಲೆ ನಿಗಾ ಇಡುವ ರೈಲ್ವೆ ಸಿಬ್ಬಂದಿ ಅದರ ಸುತ್ತಮುತ್ತ ಇರುವ ಜಾಗದಲ್ಲಿ ರಾತ್ರಿ ಹಗಲು ಯಾರಾರ‍ಯರು ಬರುತ್ತಾರೆ, ಹೋಗುತ್ತಾರೆ ಎಂಬ ಕುರಿತು ಗಮನ ಹರಿಸಬೇಕು, ರಾತ್ರಿ ರೈಲಿಗೆ ಪ್ಲಾಟ್‌ಫಾರ್ಮ್‌ನ ತುದಿಯಲ್ಲಿ ಕಾಯುವವರು ಹೆದರಿಕೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಇರುತ್ತದೆ.
ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ತೆರಳುವವರಿಗೆ ರೈಲು ವ್ಯವಸ್ಥೆ ದಿನಕ್ಕೆ ಐದು ಬಾರಿ ಇದೆ. ಅವುಗಳಲ್ಲಿ ಮೂರು ಪ್ಯಾಸೆಂಜರ್‌, ಮತ್ತೆರಡು ಎಕ್ಸ್‌ಪ್ರೆಸ್‌. ಕನ್ನಡ ಗೊತ್ತಿಲ್ಲದ ಸ್ಟೇಶನ್‌ ಮಾಸ್ಟರ್‌, ಮಲೆಯಾಳ ಮಾತನಾಡುವ ಸಿಬ್ಬಂದಿ, ಬೆರಳೆಣಿಕೆಯಷ್ಟು ಜನಸಂಖ್ಯೆ ಇರುವ ರೈಲ್ವೇ ಸ್ಟೇಶನ್‌ ಸಾರ್ವಜನಿಕರಿಗೆ ಇಂದೂ ಅಪರಿಚಿತವೆನಿಸುತ್ತಿದೆ.
ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಬೇಕಾದ ಅಗತ್ಯ ಸೌಕರ್ಯಗಳ ಕುರಿತು ರೈಲ್ವೆ ಸಚಿವರ ಗಮನಕ್ಕೆ ತರಲಾಗಿದೆ. ಜನರಿಗೆ ಅನುಕೂಲವಾಗುವಂತೆ ನಿಲ್ದಾಣವನ್ನು ರೂಪಿಸಲು ಕೋರಲಾಗಿದೆ. ಮೈಸೂರು ವಿಭಾಗದಲ್ಲಿ ರೈಲ್ವೆ ಬೇಡಿಕೆಗಳು ಹಲವಿದೆ. ಮಂಗಳೂರು-ಹಾಸನ ರೈಲ್ವೆ ಭಾಗದಲ್ಲಿ ಮೈಸೂರು ಸೆಕ್ಷ ನ್‌ ಗೆ ಒಳಪಡುವಂತೆ ಪಡೀಲ್‌ ನಿಂದ ಸುಬ್ರಹ್ಮಣ್ಯದವರೆಗೆ ಹಲವು ಬೇಡಿಕೆ ಇಡಲಾಗಿದೆ.
-ಸುದರ್ಶನ್‌ ಪುತ್ತೂರು, ಸುಬ್ರಹ್ಮಣ್ಯ-ಮಂಗಳೂರು ರೈಲು ಬಳಕೆದಾರರ ಹಿತರಕ್ಷ ಣಾ ವೇದಿಕೆ
ಮಾತಿನ ಹೊಳೆ ಹರಿಸುವ ರಾಜಕಾರಣಿಗಳು ನೇತ್ರಾವತಿ ನದಿ ಪಕ್ಕದಲ್ಲೇ ಇರುವ ರೈಲ್ವೆ ನಿಲ್ದಾಣದತ್ತ ವರ್ಷಕ್ಕೊಮ್ಮೆಯೂ ಬರುವುದಿಲ್ಲ. ಹೀಗಾಗಿ ಜನರೂ ರೈಲ್ವೆ ನಿಲ್ದಾಣ ಬಳಸಲು ಹಿಂದೇಟು ಹಾಕುತ್ತಾರೆ.
-ರಾಮ, ಪ್ರಯಾಣಿಕ.
  
Dec 03 (17:24) Namma Metro to start at 7am on Sundays (m.timesofindia.com)
Metro
BMRC/Bangalore Metro
0 Followers
1936 views

News Entry# 370715  Blog Entry# 4065283   
  Past Edits
Dec 03 2018 (17:25)
Station Tag: KSR Bengaluru City Junction (Bangalore)/SBC added by 16591🔹Hampi Express🔹16592^~/36147
Soon, Bengalureans could have a Metro ride as early as 7am even on Sundays. The Bangalore Metro Rail Corporation Ltd (BMRCL) plans to commence Sunday operations earlier than its present timing.
“We’re working to start early on Sundays. Initially, it will be from 7am and, after a few months, from 6am,” BMRCL managing director Ajay Seth said.
Currently, services commence at 8am on Sundays, and 5am on other days.
The
...
more...
move comes in the backdrop of complaints from passengers, particularly those arriving by trains and buses at Majestic, Yeshwanthpur, Mysuru Road, Peenya and Byappanahalli in the early hours.
In June last year, the BMRCL revised the timings of Namma Metro services on both Purple and Green Lines to 8am on Sundays instead of 5am. The last train from the terminal stations is at 11pm.
BMRCL had claimed that the timing was revised to take up maintenance of trains, tracks and service control systems as trains return to depots (Byappanahalli and Peenya) by around 1am and they require enough time for maintenance on Sundays.
Passengers have been demanding that BMRCL start early operations on Sundays. In fact, many intra-city and inter-city passengers reaching the city by trains and buses early on Sundays wait for hours in front of the stations to use Metro service.
NETIZENS DEMAND
Kamran Shahid, a passenger, tweeted: “Namma Metro on Sundays starts at 8am. Would be nice if and very convenient for all passengers if it starts from 5am or 6am (sic)”
Ananda Gundurao, another passenger tweeted: “Unfortunately, on Sundays they start late. Just look at the plight of those arriving in the city during morning hours. Sometime back I checked with BMRCL and they quoted maintenance. How do other metros operate elsewhere? Learn to put people in focus not hardware (sic)”.
Vikram Rao, another passenger tweeted: “Is safety only BMRCL concern? Not of other Metro networks ? How do they operate early on Sunday? Delhi Metro starts at 6.15 am on Sunday. How come? (sic)”
Dr.Shiv (@bennedose) tweeted: “People like to go out early and walk in parks or have breakfast in other parts of town on Sundays but BMRCL trips start so late on Sundays (sic)”.
  
Dec 03 (16:58) ಘಟಪ್ರಭಾ-ಮಂತ್ರಾಲಯ ರೈಲು ಸಂಚಾರಕ್ಕೆ ಆಗ್ರಹ (m.vijaykarnataka.com)
Other News
SWR/South Western
0 Followers
3487 views

News Entry# 370713  Blog Entry# 4065204   
  Past Edits
Dec 03 2018 (16:58)
Station Tag: Sindhanur/SNDHR added by 16591🔹Hampi Express🔹16592^~/36147

Dec 03 2018 (16:58)
Station Tag: Kushtagi/KSTGI added by 16591🔹Hampi Express🔹16592^~/36147

Dec 03 2018 (16:58)
Station Tag: Raichur Junction/RC added by 16591🔹Hampi Express🔹16592^~/36147

Dec 03 2018 (16:58)
Station Tag: Mantralayam Road/MALM added by 16591🔹Hampi Express🔹16592^~/36147

Dec 03 2018 (16:58)
Station Tag: Ghataprabha/GPB added by 16591🔹Hampi Express🔹16592^~/36147
ನರಗುಂದ: ವೀರ ಕೇಸರಿ ಜಗನ್ನಾಥರಾವ ಜೋಶಿ ಹುಟ್ಟಿದ ಮತ್ತು ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ನರಗುಂದ ಮಾರ್ಗವಾಗಿ ಘಟಪ್ರಭಾದಿಂದ ಮಂತ್ರಾಲಯದ ವರೆಗೆ ರೈಲು ಸಂಚಾರ ಆರಂಭಿಸುವ ದಶಕಗಳ ಬೇಡಿಕೆ ಇಡೇರಿಸಬೇಕು ಎಂದು ರೈತ ಪರ ಮತ್ತು ಕನ್ನಡಪರ ಸಂಘಟನೆಗಳು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 214ಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ ವಿಜಯಪುರ ಸಾರಿಗೆ ಸಂಪರ್ಕ ಹೊಂದಿರುವ ಮತ್ತು ಅರಭಾವಿ ಹೆಮ್ಮಡಗಾ ಮತ್ತು ಬೆಳಗಾವಿ, ಸಿಂಧನೂರ ಹೆದ್ದಾರಿ ಹೊಂದಿರುವ ಐತಿಹಾಸಿಕ ಹಿನ್ನೆಡೆಯಿರುವ ನರಗುಂದ ಮಾರ್ಗವಾಗಿ ರೈಲು ಸಂಚಾರ ಆರಂಭಿಸಬೇಕು ಎಂಬ ದಶಕಗಳ ಬೇಡಿಕೆಯಾಗಿದೆ. ಈ ಕುರಿತು 2001ರಲ್ಲಿ ರೈಲು ಮಾರ್ಗ ನಿರ್ಮಿಸುವಂತೆ ಸಲ್ಲಿಸಿದ ಮನವಿ ಲೋಕಸಭೆಯಲ್ಲಿ ಮಂಡನೆಯಾಗಿ ಆದೇಶ ಮಾಡಿದ್ದರೂ ಈವರೆಗೆ ಆದೇಶ ಜಾರಿಗೆ ಬಂದಿಲ್ಲ. ಈ ಸಂಬಂಧ ಡಿ.4 ರಂದು ನೀರಾವರಿ ವಿಷಯ ಕುರಿತು ಮುಖ್ಯಮಂತ್ರಿ ಕರೆದ ಸಭೆಯಲ್ಲಿ ಕೇಂದ್ರ ಸರಕಾರದ ಮೇಲೆ ಮತ್ತು ಸಂಬಂಧಿತ ಇಲಾಖೆಗಳ ಮೇಲೆ ಒತ್ತಡ ತಂದು ಸರ್ವೆ ಮಾಡುವಂತೆ ಎಲ್ಲ ಸಂಸದರಿಗೆ ಪತ್ರಬರೆಯಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ಅರಸ
...
more...
ವೀರ ಬಾಬಾಸಾಹೇಬರು ಆಳಿದ ಸಂಸ್ಥಾನ ಇದಾಗಿದೆ. ಐತಿಹಾಸಿಕ ವೆಂಕಟೇಶ್ವರ ದೇವಸ್ಥಾನ ಮತ್ತು ಅರಸರ ಕಾರ್ಯಸ್ಥಾನವಾಗಿದ್ದ ಅತಿ ಎತ್ತರದ ಗುಡ್ಡ, ಇತಿಹಾಸ ಸಾರುವ ಕೆಂಪಗಸಿ ಸೇರಿದಂತೆ ಅನೇಕ ಇತಿಹಾಸದ ಪಳೆಯುಳಿಕೆ ಹೊಂದಿದ ನಗರ ಇದಾಗಿದ್ದು ಇಲ್ಲಿ ಪ್ರಮುಖವಾಗಿ ವಾಣಿಜ್ಯ ಬೆಳೆಗಳಿಗೆ ಹೆಸರಾಗಿದೆ. ಮಹದಾಯಿ,ಕಳಸಾ ಬಂಡೂರಿ ಹೋರಾಟಕ್ಕೆ ನ್ಯಾಯಾಧೀಕರಣದಿಂದ 13 ಟಿಎಂಸಿ ನೀರು ಲಭಿಸಿದೆ. ಈ ಕಾಮಗಾರಿ ಜಾರಿಗೆ ಬಂದರೆ ಕೃಷಿ ಉತ್ಪಾದನೆ ಹೆಚ್ಚುವ ವಿಶ್ವಾಸವಿದೆ. ಇದೆ ಮಾರ್ಗವಾಗಿ ಬೃಹತ್‌ ಗೋಕಾಕ್‌ ಮಿಲ್ಲಗಳಿದ್ದು ಹತ್ತಿ ವ್ಯಾಪಾರವೂ ಭರದಿಂದ ನಡೆಯುತ್ತಿದೆ.
ಈ ರೈಲು ಮಾರ್ಗದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಇತಿಹಾಸ ಪ್ರಸಿದ್ದವಾಗಿದೆ. ಈ ದೇವಸ್ಥಾನಕ್ಕೆ ಪಕ್ಕದ ಮಹರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳಿಂದ ಲಕ್ಷಾಂತರ ಭಕ್ತರ ಅನುಕೂಲಕ್ಕೆ ರೈಲು ಮಾರ್ಗ ಅವಶ್ಯವಾಗಿದೆ. ಘಟಪ್ರಭಾದಿಂದ ಗೋಕಾಕ್‌, ಯರಗಟ್ಟಿ, ಮುನವಳ್ಳಿ, ಯಲ್ಲಮ್ಮನಗುಡ್ಡ, ಹೂಲಿಕಟ್ಟಿ, ನರಗುಂದ, ಮಲ್ಲಾಪುರ, ರೋಣ, ಗಜೇಂದ್ರಗಡ, ಕುಷ್ಟಗಿ, ತಾವರಗೇರೆ, ಸಿಂಧನೂರು, ರಾಯಚೂರ ಮೂಲಕ ಮಂತ್ರಾಲಯ ತಲುವ ರೈಲು ಮಾರ್ಗ ಮತ್ತು ನರಗುಂದ ಮೂಲಕ ಹುಬ್ಬಳ್ಳಿ ಬಾಗಲಕೋಟ, ಬದಾಮಿ, ವಿಜಯಪುರ ರೈಲು ಸಂಚಾರ ಆರಂಭಕ್ಕೆ ಉತ್ತರ ಕರ್ನಾಟಕ ಜನರ ಒತ್ತಾಯವಾಗಿದೆ. ದಶಕಗಳ ಬೇಡಿಕೆ ಇಡೇರಿಸಲು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಕರವೇ ಅಧ್ಯಕ್ಷ ಚನ್ನು ನಂದಿ, ರೈಲು ಹೋರಾಟ ಸಮಿತಿ ಸದಸ್ಯ ಎಂ.ಎಂ.ಖಾಜಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸಾಬಳೆ, ನಗರ ಅಧ್ಯಕ್ಷ ವಿಠಲ ಜಾದವ, ಬಾಬು ಅತ್ತಾರ, ಕರಮನಿ, ಮಂಜುನಾತ ಮುತ್ತಿನ ಸೇರಿದಂತೆ ಅನೇಕರು ಸಿರಸ್ತೆದಾರ ಎ.ಜಿ.ಪಾಟೀಲ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

  
2673 views
Dec 03 (19:06)
BijapurBulls2Titles~   5530 blog posts   362 correct pred (69% accurate)
Re# 4065204-10            Tags   Past Edits
If they just sanction Ghatprabha-Yadawad also that will great, train will go like Gpb-Lokapur-Bgk-Gdg-Ggvt-Rc-Malm, which itself looking difficult and this one big sanction via Nargund seems to be very difficult
Page#    3041 news entries  next>>

Scroll to Top
Scroll to Bottom
Go to Mobile site
Important Note: This website NEVER solicits for Money or Donations. Please beware of anyone requesting/demanding money on behalf of IRI. Thanks.
Disclaimer: This website has NO affiliation with the Government-run site of Indian Railways. This site does NOT claim 100% accuracy of fast-changing Rail Information. YOU are responsible for independently confirming the validity of information through other sources.
India Rail Info Privacy Policy